Vaishnavi. S.M
Class 9 B
ಈ ಜೀವದಲ್ಲಿವಲ (Sneha)
ಒಂದು ಊರಲ್ಲಿ ಅಭರಣ ಮತ್ತು ವೈಷ್ಣವಿ ಎಂಬ ಸ್ನೇಹಿತೆಯರು ಇದ್ದರು.
ಅವರು ಸದಾ ಒಂದಿಗೇ ಇರುತ್ತಿದ್ದರು. ಹಾಲು–ಜೇನಿನಂತೆ ಸದಾ ಸುಖವಾಗಿ ಬದುಕುತ್ತಿದ್ದರು.
ಅಭರಣ ಒಬ್ಬ ಬಡ ಹುಡುಗಿಯಾಗಿದ್ದಳು. ಆದರೆ ವೈಷ್ಣವಿ ಬಹಳ ಶ್ರೀಮಂತ ಹುಡುಗಿಯಾಗಿದ್ದಳು.
ಅಭರಣದ ತಂದೆ ಒಬ್ಬ ವೇದಭಾವವಿಲ್ಲದ, ಒಳ್ಳೆಯ ಮನಸ್ಸಿನ ವ್ಯಕ್ತಿಯಾಗಿದ್ದರು. ಇಬ್ಬರೂ ಒಬ್ಬರನ್ನೊಬ್ಬರು ಒಳ್ಳೆಯ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದರು.
ಇಬ್ಬರ ಸ್ನೇಹ ದಿನದಿಂದ ದಿನಕ್ಕೆ ಗಾಢವಾಗುತ್ತಿತ್ತು. ಎಲ್ಲರೂ ಅವರ ಸ್ನೇಹದ ಬಗ್ಗೆ ಮಾತನಾಡುತ್ತಿದ್ದರು. “ಇಂತಹ ಸ್ನೇಹ ಅಪರೂಪ” ಎಂದು ಹೇಳುತ್ತಿದ್ದರು.
ಹೀಗೆ ಇರುವಾಗ ಒಂದು ದಿನ ಶಾಲೆಯಲ್ಲಿ ಒಂದು ಹಬ್ಬದ ಸಂಭ್ರಮ ನಡೆಯಿತು.
ಆ ಸಂದರ್ಭದಲ್ಲಿ ವೈಷ್ಣವಿ ಅಭರಣಿಗೆ ಹೊಸ ಬಟ್ಟೆ ಕೊಟ್ಟಳು.
ಸಂಭ್ರಮದಲ್ಲಿ ಇಬ್ಬರೂ ತುಂಬಾ ಸುಂದರವಾಗಿ ಕಾಣುತ್ತಿದ್ದರು.
“ಇವರು ನಿಜವಾದ ಸ್ನೇಹಿತೆಯರು” ಎಂದು ಎಲ್ಲರೂ ಮಾತಾಡುತ್ತಿದ್ದರು.
ಆದರೆ ಕೆಲಕಾಲದ ನಂತರ ದೂರವಾಗುವ ಸಮಯ ಬಂತು.
ಶಾಲೆಯ ಓದು ಮುಗಿದ ಮೇಲೆ ಅಭರಣ ವೈದ್ಯಕೀಯ ಓದಲು ಹೋದಳು.
ವೈಷ್ಣವಿ ತನ್ನ ಮನೆಯ ವ್ಯವಹಾರದಲ್ಲಿ ತೊಡಗಿಕೊಂಡಳು.
ಇಬ್ಬರೂ ಒಬ್ಬರನ್ನೊಬ್ಬರು ತುಂಬಾ ನೆನಪಿಸಿಕೊಳ್ಳುತ್ತಿದ್ದರು.
ಒಂದು ದಿನ ಅಭರಣ, “ಸ್ನೇಹವೆಂದರೆ ತುಂಬಾ ನೆನಪಾಗುವ ಸಂಬಂಧ. ನಮಗೆ ಸಹಾಯ ಮಾಡುವ ನಿಜವಾದ ಬಾಂಧವ್ಯ” ಎಂದುಕೊಂಡಳು.
ಕೆಲವು ದಿನಗಳ ನಂತರ ವೈಷ್ಣವಿ ಬಡತನದಲ್ಲಿ ಜೀವನ ನಡೆಸುವ ಪರಿಸ್ಥಿತಿ ಬಂತು.
ತಂದೆಯವರು ಅನಾರೋಗ್ಯದಿಂದ ಮೃತಪಟ್ಟರು.
ಆ ದುಃಖದಿಂದ ವೈಷ್ಣವಿಗೆ ನೆನಪಿನ ಶಕ್ತಿ ಕುಂದಿತು.
ಇದನ್ನು ತಿಳಿದ ಅಭರಣ, “ನನ್ನ ಸ್ನೇಹಿತೆಯನ್ನು ನೋಡಲೇಬೇಕು” ಎಂದು ತಕ್ಷಣ ಹೋದಳು.
ಅಲ್ಲಿ ವೈಷ್ಣವಿಗೆ ಏನೂ ನೆನಪಿರಲಿಲ್ಲ.
ಅಭರಣ ಕೇಳಿದಳು:
“ವೈಷ್ಣವಿ, ನನ್ನನ್ನು ಗುರುತಿಸಿಲ್ಲವೇ?”
ವೈಷ್ಣವಿ ಹೇಳಿದಳು:
“ಕ್ಷಮಿಸಿ, ನೀವು ಯಾರು? ನಾನು ಯಾರನ್ನು ಗುರುತಿಸಬೇಕು?”
ಅಭರಣಗೆ ಅರ್ಥವಾಯಿತು – ಅವಳು ತನ್ನ ನೆನಪನ್ನು ಕಳೆದುಕೊಂಡಿದ್ದಾಳೆ ಎಂದು.
ಆದರೂ ಅವಳು ಹೇಳಿದಳು:
“ನಾನು ನಿನ್ನ ಸ್ನೇಹಿತೆ ಅಭರಣ. ನಿನಗೆ ಏನೂ ನೆನಪಿಲ್ಲದಿದ್ದರೂ ಪರವಾಗಿಲ್ಲ. ನಾನು ನಿನ್ನ ಜೊತೆ ಇದ್ದೇನೆ.”
ಅಭರಣ ವೈದ್ಯೆಯಾಗಿದ್ದಳು.
ಅವಳಿಗೆ ಚಿಕಿತ್ಸೆ ಕೊಡಲು ಪ್ರಾರಂಭಿಸಿದಳು.
ಒಂದು ವರ್ಷ ಚಿಕಿತ್ಸೆ ಬಳಿಕವೂ ವೈಷ್ಣವಿಗೆ ಏನೂ ನೆನಪಾಗಲಿಲ್ಲ.
ಆದರೆ ಒಂದು ದಿನ ಹಳೆಯ ಫೋಟೋಗಳನ್ನು ತೋರಿಸಿದಾಗ, ಅವಳಿಗೆ ಹಳೆಯ ನೆನಪುಗಳು ನಿಧಾನವಾಗಿ ಮರಳಿ ಬಂದವು.
ಅವಳು ಅತ್ತಳು ಮತ್ತು ಹೇಳಿದಳು:
“ಅಭರಣ, ಈಗ ನನಗೆ ಎಲ್ಲವೂ ನೆನಪಾಗಿದೆ. ನೀನು ನನ್ನ ನಿಜವಾದ ಸ್ನೇಹಿತೆ.”
ಅಭರಣ ಹೇಳಿದಳು:
“ನೀನು ನನ್ನ ಪ್ರಾಣ ಸ್ನೇಹಿತೆ. ನಾನು ಈ ಜೀವನದಲ್ಲಿ ಸದಾ ನಿನ್ನ ಜೊತೆ ಇರುತ್ತೇನೆ.”
ಇಬ್ಬರೂ ಮುಂದುವರೆದು ಸಂತೋಷವಾಗಿ ಬದುಕಿದರು.