ಲೋಭಿ ಧನಿಕ (buddhivanta huduga)

Chetan FA

Class 9 B

ಲೋಭಿ ಧನಿಕ (buddhivanta huduga)

ಒಂದು ಊರಲ್ಲಿ ಒಬ್ಬ ಶ್ರೀಮಂತ ವ್ಯಕ್ತಿ ಇದ್ದನು.
ಅವನಿಗೆ ಅಕ್ಕ-ತಂಗಿಯರು ಇದ್ದರು.

ಅವರಲ್ಲಿ ಒಬ್ಬಳು ನನ್ನ ನಾಯಕನ ಅಕ್ಕನಾಗಿದ್ದಳು.
ಅವನ ಜೊತೆ ಅವಳು ತುಂಬಾ ಪ್ರೀತಿಯಿಂದ ತಮ್ಮನಂತೆ ನಡೆದುಕೊಳ್ಳುತ್ತಿದ್ದಳು.

ಅವನಿಗೆ ಒಬ್ಬನೇ ಮಗ.
ಆ ಊರಿನ ಎಲ್ಲರೂ ಆ ಮಗನನ್ನು “ಹುಚ್ಚು ಹುಡುಗ” ಎಂದು ಕರೆಯುತ್ತಿದ್ದರು.
ಅವನಪ್ಪ ಕೂಡ ಅವನನ್ನು ಹಾಗೆಯೇ ಹೇಳುತ್ತಿದ್ದ.

ಆ ಶ್ರೀಮಂತನನ್ನು ಊರವರು ದೇವರಂತೆ ಕಾಣುತ್ತಿದ್ದರು.

ಪ್ರತಿ ಮಂಗಳವಾರ ಆ ಊರಲ್ಲಿ ಸಂತೆಯಿರುತ್ತಿತ್ತು.
ಎಲ್ಲರೂ ಅಲ್ಲಿ ಬರುತ್ತಿದ್ದರು. ಶ್ರೀಮಂತನೂ ಬರುತ್ತಿದ್ದನು.

ಒಂದು ದಿನ ಶ್ರೀಮಂತನು ನಾಯಕನಿಗೆ ಹೇಳಿದನು:
“ನಿನ್ನ ಮಗನಿಗೆ ನಾನು ಒಂದು ಪ್ರಶ್ನೆ ಕೇಳಿದೆ. ಒಂದು ರೂಪಾಯಿ ದೊಡ್ಡದಾ? ಅಥವಾ ಹತ್ತು ರೂಪಾಯಿ ದೊಡ್ಡದಾ? ಎಂದು ಕೇಳಿದಾಗ, ಅವನು ಒಂದು ರೂಪಾಯಿ ದೊಡ್ಡದು ಎಂದನು!”

ಅದು ಕೇಳಿದ ನಾಯಕನು ಮನೆಗೆ ಹೋಗಿ ತನ್ನ ಮಗನನ್ನು ಕೇಳಿದನು:
“ಏಕೆ ಹೀಗೆ ಹೇಳಿದೆ? ಹತ್ತು ರೂಪಾಯಿ ದೊಡ್ಡದು ಅಲ್ಲವೇ?”

ಆಗ ಮಗನು ಹೇಳಿದನು:
“ಅಪ್ಪಾ, ನಾನು ನಿಮಗೆ ಸತ್ಯ ಹೇಳುತ್ತೇನೆ. ನಾನು ಒಂದು ರೂಪಾಯಿ ದೊಡ್ಡದು ಎಂದಾಗ ಎಲ್ಲರೂ ನಕ್ಕರು. ನನ್ನನ್ನು ‘ಹುಚ್ಚು ಹುಡುಗ’ ಎಂದರು. ಆದರೆ ಪ್ರತಿ ಮಂಗಳವಾರ ಅವರು ಮತ್ತೆ ಮತ್ತೆ ನನಗೆ ಒಂದು ರೂಪಾಯಿ ಕೊಡುತ್ತಾರೆ.”

ಹೀಗೆ ಹೇಳಿ ಅವನು ಒಳಗಿನಿಂದ ಒಂದು ಚೀಲ ತಂದು ತೋರಿಸಿದನು.
ಆ ಚೀಲ ತುಂಬಾ ಒಂದು ರೂಪಾಯಿ ನಾಣ್ಯಗಳಿಂದ ತುಂಬಿತ್ತು.

ಅವನು ಹೇಳಿದನು:
“ಅಪ್ಪಾ, ನಾನು ಒಂದೇ ಸಲ ಹತ್ತು ರೂಪಾಯಿ ತೆಗೆದುಕೊಂಡಿದ್ದರೆ, ಅವರು ಮುಂದೆ ನನಗೆ ಏನೂ ಕೊಡುತ್ತಿರಲಿಲ್ಲ. ಆದರೆ ನಾನು ಒಂದು ರೂಪಾಯಿ ತೆಗೆದುಕೊಳ್ಳುತ್ತಾ ಬಂದಿದ್ದರಿಂದ, ಅವರು ಪ್ರತಿಸಾರಿ ಕೊಡುತ್ತಲೇ ಇದ್ದರು.”

ಇದು ಕೇಳಿ ಅವನಪ್ಪ ನಕ್ಕನು.

Leave a Comment

Your email address will not be published. Required fields are marked *

Scroll to Top